ಪಂಚಮಸಾಲಿ ಮೀಸಲಾತಿ ಹೋರಾಟ: ರಕ್ತದಲ್ಲಿ ಬರೆದು ಸಿಎಂಗೆ ಪತ್ರ - incubated-panchamasaali-reservation-fight
🎬 Watch Now: Feature Video
ತುಮಕೂರು: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಜಯ ಸಿಗಬೇಕು ಹಾಗೂ ಮುಖ್ಯಮಂತ್ರಿ ಹೋರಾಟಕ್ಕೆ ಪೂರಕವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿ ವ್ಯಕ್ತಿಯೊಬ್ಬರು ರಕ್ತದಲ್ಲಿ ಪತ್ರ ಬರೆದಿರೋದು ಗಮನ ಸೆಳೆಯುತ್ತಿದೆ. ಈ ಮೂಲಕ ಪಂಚಮಸಾಲಿ ಲಿಂಗಾಯತ 2ಎ ಹೋರಾಟವು ರಕ್ತದ ಕಾವು ಪಡೆದಿದೆ. ಮಂಜುನಾಥ ಈಶ್ವರಪ್ಪ ಎಂಬುವರು 'ರಕ್ತ ಕೊಟ್ಟೇವು ಮೀಸಲಾತಿ ಬಿಡೆವು" ಅನ್ನೋ ಬರಹದ ರಕ್ತದ ಪತ್ರ ಬರೆದು ಮಿಸಲಾತಿ ನೀಡುವಂತೆ ಆಗ್ರಹಿಸಿ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.