ಗೌರಿ, ಗಣೇಶ ಹಬ್ಬದ ಹಿನ್ನೆಲೆ: ಬಿಜೆಪಿ ಮಹಿಳಾ ಮೋರ್ಚಾದಿಂದ ಮಾಸ್ಕ್ ವಿತರಣೆ - ಬಿಜೆಪಿ ಮಹಿಳಾ ಮೋರ್ಚಾ
🎬 Watch Now: Feature Video
ಬಿಜೆಪಿ ಮಹಿಳಾ ಮೊರ್ಚಾದಿಂದ ಗೌರಿ ಗಣೇಶ ಹಬ್ಬದ ನಿಮಿತ್ತ ಶಿವಮೊಗ್ಗ ನಗರದ ಗಾಂಧಿ ಬಜಾರ್ನಲ್ಲಿ ಮಾಸ್ಕ್ ವಿತರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸಲಾಯಿತು. ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸುವ ಸಲುವಾಗಿ ಮಾಸ್ಕ್, ಮಂಗಳ ದ್ರವ್ಯಗಳಾದ ಅರಿಶಿನ, ಕುಂಕುಮ, ಹೂ ನೀಡುವ ಮೂಲಕ ಬಿಜೆಪಿ ಮಹಿಳಾ ಮೊರ್ಚಾದ ವತಿಯಿಂದ ಜಾಗೃತಿ ಮೂಡಿಸಲಾಯಿತು. ಮಹಿಳಾ ಮೋರ್ಚಾದ ಕಾರ್ಯಕರ್ತೆಯರೇ ತಯಾರಿಸಿರುವ ಮಾಸ್ಕ್ಗಳನ್ನು ಜನ ದಟ್ಟನೆ ಇರುವ ಗಾಂಧಿ ಬಜಾರ್ನಲ್ಲಿ ಹಾಗೂ ಶಿವಪ್ಪನಾಯಕ ವೃತ್ತದಲ್ಲಿ ವಾಹನ ಸವಾರರಿಗೆ ವಿತರಿಸುವ ಮೂಲಕ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದರು.