ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು; ಖೂಬಾ ಕಾಲಿಗೆ ಬಿದ್ದ ಶರಣು ಸಲಗರ - ಸಂಸದ ಭಗವಂತ್ ಖೂಬಾ
🎬 Watch Now: Feature Video
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಸಲಗರ ಕಾಂಗ್ರೆಸ್ನ ಮಾಲಾ.ಬಿ ನಾರಾಯಣರಾವ್ ವಿರುದ್ಧ ಸುಮಾರು 20,904 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು 70,556 ಮತಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಗೆಲುವು ಖಚಿತವಾಗುತ್ತಿದ್ದಂತೆ ಸಂಸದ ಭಗವಂತ ಖೂಬಾ ಕಾಲಿಗೆ ಬಿದ್ದ ಸಲಗರ ಆಶೀರ್ವಾದ ಪಡೆದಿದ್ದಾರೆ.