ಬಿಎಸ್ವೈಗೆ ಶುಭಕೋರಲು ಕಾರ್ಯಕರ್ತರ ದಂಡು... - Bjp workers meet BSY, BJP workers meet new Cm News
🎬 Watch Now: Feature Video
ನೂತನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಶುಭಕೋರಲು ಡಾಲರ್ಸ್ ಕಾಲೊನಿಯ ಧವಳಗಿರಿ ನಿವಾಸಕ್ಕೆ ನೂರಾರು ಕಾರ್ಯಕರ್ತರ ದಂಡೇ ಬೆಳ್ಳಂಬೆಳಗ್ಗೆ ಆಗಮಿಸಿತ್ತು. ನಾಲ್ಕನೇ ಬಾರಿಗೆ ಸಿಎಂ ಆಗಿರುವ ಬಿಎಸ್ವೈಗೆ ಹೂವಿನ ಹಾರ, ಬೊಕ್ಕೆಗಳನ್ನು ನೀಡಿ ಶುಭಕೋರಲಾಗುತ್ತಿದೆ. ಮಗ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ರೇಣುಕಾಚಾರ್ಯ ಕೂಡಾ ಸಿಎಂ ಜೊತೆಗಿದ್ದಾರೆ. ಇಂದು ಯಡಿಯೂರಪ್ಪ ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಬೆಳಗ್ಗೆ 10 ಗಂಟೆಗೆ ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.