ಸಿದ್ದಾರ್ಥ್ ಹೆಗ್ಡೆ ಜನ್ಮದಿನ: ಕಾಫಿನಾಡಿನಲ್ಲಿ ರಕ್ತದಾನ ಶಿಬಿರ - ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4225348-thumbnail-3x2-ckm.jpg)
ಚಿಕ್ಕಮಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆಗೆ ಶರಣಾಗಿ 25 ದಿನ ಕಳೆದಿರುವ ಹಿನ್ನೆಲೆ ಹಾಗೂ ಅವರ 60ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅವರಿಂದ ಬದುಕು ಕಟ್ಟಿಕೊಂಡ ವೆಂಕಟೇಶ ಮಾಕೋನಹಳ್ಳಿ, ಆನಂದ್, ಮಂಜು, ಚೇತನ್ ಎಂಬುವರು ರಕ್ತದಾನ ಶಿಬಿರವನ್ನು ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದರು. ಈ ರಕ್ತದಾನ ಶಿಬಿರದಲ್ಲಿ ಕಾಫಿನಾಡಿನ 180 ಕ್ಕೂ ಹೆಚ್ಚು ಜನರು, ಸಿದ್ದಾರ್ಥ್ ಸ್ಮರಣಾರ್ಥಕವಾಗಿ ರಕ್ತದಾನ ಮಾಡಿದ್ರು. ಈ ರಕ್ತದಾನ ಶಿಬಿರ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ, ಕೆ.ಆರ್.ಎಸ್ ಹಾಗೂ ಹೋಲಿಕ್ರಾಸ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆಯಿತು. ಸಿದ್ದಾರ್ಥ್ ಹೆಗ್ಡೆ ಅಭಿಮಾನಿಗಳು ನೀಡಿದ ರಕ್ತವನ್ನು ಮೂರು ಆಸ್ಪತ್ರೆಯ ಬ್ಲಡ್ ಕ್ಯಾಂಪ್ಗೆ ನೀಡಲಾಗಿದೆ.