ಬೈರತಿ ಬೆಂಬಲಿಗರಿಂದ ಕೆಆರ್ಪುರದ ಗಣೇಶನಿಗೆ ವಿಶೇಷ ಪೂಜೆ - ಅನರ್ಹ ಶಾಸಕರು
🎬 Watch Now: Feature Video
ಬೆಂಗಳೂರು: ಅನರ್ಹ ಶಾಸಕರ ಪರ ಸುಪ್ರೀಂ ಕೋರ್ಟ್ ತೀರ್ಪು ಬರಲೆಂದು ಬೈರತಿ ಬೆಂಬಲಿಗರು ಕೆಆರ್ಪುರದ ಗಣೇಶ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ನೆರವೇರಿಸಿದರು. ಹಲವು ಅಡ್ಡಿ ಆತಂಕಗಳಿಂದ ತೀರ್ಪು ನೀಡದೆ ಮುಂದೂಡುತ್ತಿದ್ದು ಇಂದೇ ಸುಪ್ರೀಂ ತೀರ್ಪು ನೀಡಲೇಂದು ದೇವರ ಮೊರೆ ಹೋದರು. ಅನರ್ಹರ ಕ್ಷೇತ್ರಗಳಲ್ಲಿ ಈಗಾಗಲೇ ಬೈ ಎಲೆಕ್ಷನ್ ಘೋಷಿಸಿದ್ದು, ಆತಂಕಕ್ಕೆ ಒಳಗಾಗಿದ್ದಾರೆ, ಈ ಹಿನ್ನೆಲೆ ತೀರ್ಪು ಅನರ್ಹರ ಪರ ಬಂದು ಚುನಾವಣೆಯಲ್ಲಿ ಅವರೇ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಬೈರತಿ ಬೆಂಬಲಿಗರು ಪ್ರಾರ್ಥಿಸಿದರು.