ಭಟ್ಕಳ: 14 ಅಡಿ ಉದ್ದದ ಹೆಬ್ಬಾವು ಪತ್ತೆ! - Bhatkal python news

🎬 Watch Now: Feature Video

thumbnail

By

Published : Sep 22, 2020, 12:02 PM IST

ಭಟ್ಕಳ ತಾಲೂಕಿನ ಬೈಲೂರು ಪಂಚಾಯತ್ ವ್ಯಾಪ್ತಿಯ ಮಡಿಕೇರಿಯ ಭಾಸ್ಕರ್​​ ಕಾಮತ್ ಎನ್ನುವವರ ಮನೆಯಂಗಳದಲ್ಲಿ ಸುಮಾರು 14 ಅಡಿ ಉದ್ದದ 25ರಿಂದ 30 ಕೆಜಿಗೂ ಅಧಿಕ ತೂಕವಿರುವ ಹೆಬ್ಬಾವೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದಾರೆ. ಮನೆಯಂಗಳದಲ್ಲಿ ನೋಡಿದ ಈ ಬೃಹದಾಕಾರದ ಹಾವನ್ನು ರಕ್ಷಿಸುವಂತೆ ಸಮೀಪದ ಮುರ್ಡೇಶ್ವರ ನಾಖದಲ್ಲಿರುವ ಅರಣ್ಯ ಇಲಾಖೆಯ ಶಾಖೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದಾಗ, ಆ ಭಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಿರಿಯ ಫಾರೆಸ್ಟ್ ಸಿಬ್ಬಂದಿಯೋರ್ವರು ತಮ್ಮ ಕರ್ತವ್ಯದಿಂದ ನುಣುಚಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಮಂಕಿ ಭಾಗದ ಹಿರಿಯ ಅಧಿಕಾರಿಗಳಾದ ಎಂ.​ಎಂ.ಮಡ್ಡಿಯವರ ಮಾರ್ಗದರ್ಶನದಲ್ಲಿ ಫಾರೆಸ್ಟ್ ಗಾರ್ಡ್​ ದೇವೇಂದ್ರ ಗೊಂಡ, ಉರಗ ಪ್ರೇಮಿ ಉದಯ ನಾಯ್ಕ ಹಾಗೂ ಡ್ರೈವರ್​ ಗೋಪಾಲ ಗೌಡ ನೇತೃತ್ವದ ತಂಡವೊಂದು ಸ್ಥಳಕ್ಕೆ ಧಾವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.