ಸರಳವಾಗಿ ನೆರವೇರಿದ ಭ್ರಮರಾಂಬಾ ದೇವಿ ರಥೋತ್ಸವ - Favorite Math Varudramuni Swamiji
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9377345-765-9377345-1604129086323.jpg)
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಭ್ರಮರಾಂಬಾ ದೇವಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ರಥಕ್ಕೆ ಪೂಜೆ ಸಲ್ಲಿಸಿದ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ದೇವಾಲಯದ ಬಳಿ ಮಹಿಳೆಯರು ರಥವನ್ನು ಎಳೆಯುವ ಮೂಲಕ ರಥೋತ್ಸವ ನೆರವೇರಿಸಿ ಸಂಭ್ರಮಿಸಿದ್ದಾರೆ. ಭ್ರಮರಾಂಬಾ ದೇವಿ ಪುರಾಣದ ಮಹಾಮಂಗಲದ ನಿಮಿತ್ತ ದೇವಿಯ ರಥೋತ್ಸವ ನೆರವೇರಿಸಲಾಯಿತು. ಇದಕ್ಕೂ ಮೊದಲು ಭ್ರಮರಾಂಬಾ ದೇವಿಯ ಉತ್ಸವ ಮೂರ್ತಿಯನ್ನು 5 ಸುತ್ತು ರಥದ ಪ್ರದಕ್ಷಿಣೆ ಮಾಡಿ, ಭಕ್ತರ ಜಯಘೋಷಗಳ ನಡುವೆ ರಥದಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.