ಕರುನಾಡಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆ? ಈ ಪುಸ್ತಕದ ಮಳಿಗೆಗೆ ಭೇಟಿ ನೀಡಿ - ನಾಗಸಂದ್ರ ಮುನ್ನೋಟ ಪುಸ್ತಕ ಮಳಿಗೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4933095-thumbnail-3x2-book.jpg)
ಬೆಂಗಳೂರು: ನವೆಂಬರ್ 1ರಂದು ಮಾತ್ರ ಕನ್ನಡಿಗರಾಗದೆ, ಪ್ರತಿ ವರ್ಷ ಪ್ರತಿ ದಿನ ಕನ್ನಡದ ಕಾರ್ಯಕರ್ತರಾಗಿ ದುಡಿಯುವ ಯುವಕರ ತಂಡವೊಂದು
ಮುನ್ನೋಟ ಟ್ರಸ್ಟ್ ಮೂಲಕ ಬಸವನಗುಡಿಯ ನಾಗಸಂದ್ರ ಬಳಿ ಮುನ್ನೋಟ ಪುಸ್ತಕ ಮಳಿಗೆಯನ್ನು ಕಳೆದ ಮೂರು ವರ್ಷದಿಂದ ನಡೆಸುತ್ತಿದೆ. ವೃತ್ತಿಯಲ್ಲಿ ಎಂಜಿನಿಯರ್ಸ್ ಆಗಿದ್ದರೂ ಈ ಯುವಕರು ಕನ್ನಡ ನೆಲ, ಕನ್ನಡ ಭಾಷೆಗಾಗಿ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. ಕರುನಾಡಿನ ಬಗ್ಗೆ ಸಮಗ್ರ ಮಾಹಿತಿಯುಳ್ಳ ಪುಸ್ತಕಗಳು ಇಲ್ಲಿ ಮಾರಾಟಕ್ಕಿವೆ. ಈ ಬಗ್ಗೆ ನಮ್ಮ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಮೂಲಕ ವಿವರವಾಗಿ ಮಾಹಿತಿ ನೀಡಿದ್ದಾರೆ.
Last Updated : Nov 2, 2019, 10:35 AM IST