ಬಂಗಾಳ ಚುನಾವಣೆ ಆರಂಭ: ಉತ್ಸಾಹದಲ್ಲಿ ಬಿಜೆಪಿ, ಅಧಿಕಾರ ಉಳಿಸಿಕೊಳ್ಳಲು ಟಿಎಂಸಿ ಕಸರತ್ತು - ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ

🎬 Watch Now: Feature Video

thumbnail

By

Published : Mar 27, 2021, 7:08 AM IST

Updated : Mar 27, 2021, 7:36 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇಂದು ಮೊದಲ ಹಂತದ ಮತದಾನ ಆರಂಭವಾಗಿದೆ. ಈ ಮಧ್ಯೆ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಈ ಚುನಾವಣೆಯಲ್ಲಿ ಪ್ರಮುಖ ಸ್ಪರ್ಧಿಗಳಾಗಿ ಹೊರಹೊಮ್ಮಿವೆ. 2016 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 10.16 ರಷ್ಟು ಮತಗಳನ್ನು ಗಳಿಸಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ 40.25 ರಷ್ಟು ಮತಗಳನ್ನು ಗಳಿಸಿದ ಬಿಜೆಪಿ ಸುಮಾರು ಶೇ 24 ರಷ್ಟು ಮತಗಳನ್ನು ಹೆಚ್ಚಿಸಿಕೊಂಡಿತ್ತು. ಪಕ್ಷದ ಮಟ್ಟಿಗೆ ಇದು ಒಂದು ಮಹತ್ವದ ಸಾಧನೆ ಎಂದೇ ಬಿಂಬಿತವಾಗಿತ್ತು. ಹೀಗಾಗಿ ಬಿಜೆಪಿ ತನ್ನ 2019 ರ ಕಾರ್ಯಕ್ಷಮತೆಯನ್ನು ಪುನರಾವರ್ತಿಸಲು ಬಂಗಾಳದಲ್ಲಿ ಆಡಳಿತ ವಿರೋಧಿ ಭಾವನೆ ಮೂಡಿಸಿ ವೋಟ್​ ಬ್ಯಾಂಕಿಂಗ್​ ಪ್ರಯತ್ನ ಮಾಡುತ್ತಿದ್ದರೆ, ಟಿಎಂಸಿ ಬಿಜೆಪಿಯಿಂದಾಗಿ ಕಳೆದುಕೊಂಡ ಕ್ಷೇತ್ರಗಳನ್ನು ಮರಳಿ ಪಡೆಯುವ ಆಶಯವನ್ನು ಹೊಂದಿದೆ.
Last Updated : Mar 27, 2021, 7:36 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.