ಹುಣಸೋಡು ಸ್ಫೋಟದ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಿ: ಬೇಳೂರು ಗೋಪಾಲಕೃಷ್ಣ - ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ
🎬 Watch Now: Feature Video

ಶಿವಮೊಗ್ಗ: ರಾಜ್ಯ ಸರ್ಕಾರ ಬದುಕಿದೆ ಎಂದು ತೋರಿಸಬೇಕಾದ್ರೆ, ಹುಣಸೋಡು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದ ಅವರು, ಪುಲ್ವಾಮ ಮೇಲೆ ದಾಳಿ ನಡೆಸಿದಾಗ ಮೋದಿಯವರು ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದರು. ಅದೇ ರೀತಿ ಈಗ ಹುಣಸೋಡು ಗ್ರಾಮದ ಕ್ರಷರ್ನಲ್ಲಿ ನಡೆದ ಸ್ಪೋಟಕ್ಕೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.