ಗಣಿನಾಡಲ್ಲಿ ಬಯೋ ಮೆಡಿಕಲ್ ಘನತ್ಯಾಜ್ಯ ನಿರ್ವಹಣೆ ಅಚ್ಚುಕಟ್ಟು: ಈಟಿವಿಗೆ ಮಾಹಿತಿ ನೀಡಿದ ವೈದ್ಯರು - ಸಮರ್ಪಕ ಘನತ್ಯಾಜ್ಯ ನಿರ್ಹಣೆ ಮಾಡಿದ ಬಳ್ಳಾರಿ ಜಿಲ್ಲಾಸ್ಪತ್ರೆ
🎬 Watch Now: Feature Video
ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಮಾಡುವ ಸಲುವಾಗಿ ಬಳಸುವ ಘನತ್ಯಾಜ್ಯ ವಿಲೇವಾರಿಯನ್ನು ಜಿಲ್ಲಾಸ್ಪತ್ರೆ ಕಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದೆ. ಸೋಂಕಿನ ಆರಂಭಿಕ ದಿನದಿಂದಲೂ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಸಿಬ್ಬಂದಿಗೆ ವಿಲೇವಾರಿ ಕುರಿತಂತೆ ಸೂಕ್ತ ತರಬೇತಿ ನೀಡಲಾಗಿದೆ. ಅಲ್ಲದೆ ಘನತ್ಯಾಜ್ಯವನ್ನು ಸಂಗ್ರಹಿಸುವ ಕೆಲಸವನ್ನು ನಗರ ಹೊರವಲಯದ ಸೂರ್ಯ ಕಾಂತ್ ಏಜೆನ್ಸಿಗೆ ವಹಿಸಲಾಗಿದೆ. ಅವರು ಜಿಲ್ಲಾಸ್ಪತ್ರೆಗೆ ಬಂದು ಸಂಗ್ರಹಿಸಿಟ್ಟ ಘನತ್ಯಾಜ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಹೀಗಾಗಿ ಈವರೆಗೆ ಘನತ್ಯಾಜ್ಯ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆಯಾಗಲಿ, ಲೋಪದೋಷವಾಗಲಿ ಕಂಡು ಬಂದಿಲ್ಲ.ಈ ಕುರಿತಂತೆ ಜಿಲ್ಲಾಸ್ಪತ್ರೆಯ ವೈದ್ಯರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
Last Updated : Jan 18, 2021, 12:46 PM IST