ಬೆಳಗಾವಿ ಪತ್ರಕರ್ತರ ಸಂಘದಿಂದ ’ಪಾಪು’ಗೆ ಶ್ರದ್ಧಾಂಜಲಿ - ಬೆಳಗಾವಿ ಪತ್ರಕರ್ತರ ಸಂಘದಿಂದ ಪಾಪುಗೆ ಶ್ರದ್ಧಾಂಜಲಿ
🎬 Watch Now: Feature Video
ಬೆಳಗಾವಿ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಭವನದಲ್ಲಿ ಇಂದು ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಪಾಪು ಅವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಬೆಳಗಾವಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಹೇಶ ವಿಜಾಪುರ, ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಕನ್ನಡ ನಾಡು-ನುಡಿಯ ರಕ್ಷಣೆಯಲ್ಲಿ ಕೈಗೊಂಡ ಸೇವೆ ಸ್ಮರಣೀಯವಾದುದು ಎಂದು ನೆನಪು ಮಾಡಿಕೊಂಡರು.