ನೋಡಲೆರಡು ಕಣ್ಣು ಸಾಲದು ತುಂಗೆಯ ಚೆಲುವ.. ವಿಡಿಯೋ - ನೋಡಲೆರಡು ಕಣ್ಣು ಸಾಲದು ತುಂಗೆಯ ಚೆಲುವ
🎬 Watch Now: Feature Video
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಇಂದು ಸುಮಾರು 1.80 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಸುತ್ತಲೂ ಬೆಟ್ಟಗುಡ್ಡ, ಹಸಿರಿನ ನಡುವೆ ತುಂಗಭದ್ರೆ ಮೈದುಂಬಿ ಹರಿಯುತ್ತಿದ್ದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದಾಳೆ. ಗಂಗಾವತಿ ತಾಲೂಕಿನ ಸಾಣಾಪುರ ಬಳಿಯ ಬಾಲಾಂಜನೇಯ ದೇವಸ್ಥಾನವಿರುವ ಸುಮಾರು 2000 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ನಿಂತಾಗ ಕಾಣುವ ತುಂಗೆಯ ಚೆಲುವ ಹೇಗಿದೆ ಎಂಬುದನ್ನು ನಮ್ಮ ಕೊಪ್ಪಳ ಪ್ರತಿನಿಧಿ ಮೌನೇಶ್ ಎಸ್.ಬಡಿಗೇರ್ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.