ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್ಡೌನ್ ಅವಶ್ಯಕ, ಭಯಬೇಡ: ಬಿ.ಸಿ.ಪಾಟೀಲ್ ಅಭಯ - ಕೊರೊನಾ ಸೋಂಕು
🎬 Watch Now: Feature Video
ಬೆಂಗಳೂರು: ಲಾಕ್‌ಡೌನ್‌ಗೆ ರಾಜ್ಯದ ಜನರು ಭಯಪಡುವ ಅವಶ್ಯಕತೆಯಿಲ್ಲ ಎಂದು ಕೃಷಿ ಸಚಿವರಾದ ಬಿ. ಸಿ. ಪಾಟೀಲ್ ಧ್ಯರ್ಯ ತುಂಬಿದ್ದಾರೆ. ಕೊರೊನಾ ಸೋಂಕು ಪಸರಿಸದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್‌ಗೆ ಆದೇಶಿಸಲಾಗಿದೆ. ಇದಕ್ಕೆ ರಾಜ್ಯದ ಜನರು ಭಯಪಡುವುದಾಗಲಿ ಆತಂಕಕ್ಕೀಡಾಗುವ ಅವಶ್ಯಕತೆಯಿಲ್ಲ. ಅಂತರ ಕಾಯ್ದುಕೊಳ್ಳುವುದೊಂದೇ ಸದ್ಯದ ಮಾರ್ಗ. ಲಾಕ್ ಡೌನ್‌ಗೆ ಸಹಕರಿಸುವಂತೆ ಸಚಿವರು ಮನವಿ ಮಾಡಿದ್ದಾರೆ.