ವೈಭವದ ಬನಶಂಕರಿ ದೇವಿ ಜಾತ್ರಾ ರಥೋತ್ಸವ,,ವಿಡಿಯೋ - ಶ್ರೀ ಬನಶಂಕರಿ ದೇವಸ್ಥಾನದ ಜಾತ್ರಾ ಮಹೋತ್ಸವ
🎬 Watch Now: Feature Video
ಬಸವಕಲ್ಯಾಣ: ನಗರದ ಶ್ರೀ ಬನಶಂಕರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಹಿನ್ನೆಲೆ ಇಂದು ರಾತ್ರಿ ವೈಭವದ ರಥೋತ್ಸವ ಜರುಗಿತು. ಕಳೆದ ಜನವರಿ 3 ರಿಂದ ಒಂದು ವಾರಗಳ ಕಾಲ ನಡೆದ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು, ಅದ್ಧೂರಿ ರಥೋತ್ಸವ ಜರುಗಿತು. ಮಹಿಳೆಯರು, ಮಕ್ಕಳು ಸೇರಿದಂತೆ ಜಿಲ್ಲೆಯ ವಿವಿಧಡೆಯಿಂದ ಭಕ್ತರು ಆಗಮಿಸಿ ರಥೋತ್ಸವದ ಅದ್ಭುತ ಘಳಿಗೆಗೆ ಸಾಕ್ಷಿಯಾದರು.