ಒಂದೇ ಬೈಕ್ನಲ್ಲಿ ನಾಲ್ವರ ಪ್ರಯಾಣ, ಪೊಲೀಸರಿಂದ ಲಾಠಿ ಏಟಿನ ಗಿಪ್ಟ್ - ಬಸವಕಲ್ಯಾಣ ಲಾಕ್‌ಡೌನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6578710-thumbnail-3x2-corona.jpg)
ಬಸವಕಲ್ಯಾಣ: ಕೊರೊನಾ ಭೀತಿಯಿಂದಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ಆದರೆ, ಕೇಂದ್ರದ ಆದೇಶ ಉಲ್ಲಂಘಿಸಿ ಬೈಕ್ ಮೇಲೆ ಅನಗತ್ಯವಾಗಿ ಸುತ್ತಾಡುತಿದ್ದ ಯುವಕರನ್ನು ಹಿಡಿದು ಬಸ್ಕಿ ಹೊಡಿಸುವ ಮೂಲಕ ಬಿಸಿ ಮುಟ್ಟಿಸಿದ ಪ್ರಸಂಗ ತಾಲೂಕಿನ ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂದ್ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಬಸಲಿಂಗಪ್ಪ ಹಾಗೂ ಸಿಬ್ಬಂದಿ ತಂಡ ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಒಂದೇ ಬೈಕ್ ಮೇಲೆ ನಾಲ್ವರು ಯುವಕರು ಕುಳಿತು ಪ್ರಯಾಣಿಸುತಿದ್ದ ವೇಳೆ ಯುವಕರನ್ನು ತಡೆದ ಪೊಲೀಸರು ತಂಡ ನಾಲ್ಕು ಜನ ಯುವಕರಿಗೆ ನಡು ರಸ್ತೆಯಲ್ಲಿಯೇ ಬಸ್ಕಿ ಹೊಡೆಸುವ ಮೂಲಕ ಅನಗತ್ಯವಾಗಿ ಸಂಚರಿಸುವ ಜನರಿಗೆ ಬಿಸಿ ಮುಟ್ಟಿಸಿದರು.
Last Updated : Mar 28, 2020, 10:12 PM IST