ETV Bharat / entertainment

ಛಾವಾ: ಮೂರೇ ದಿನದಲ್ಲಿ ₹100 ಕೋಟಿಗೂ ಅಧಿಕ ಕಲೆಕ್ಷನ್; ಯಶಸ್ಸಿನ ಹಾದಿಯಲ್ಲಿ ರಶ್ಮಿಕಾ ಮಂದಣ್ಣ​​ - CHHAAVA COLLECTION

ಛಾವಾ ಚಿತ್ರ ತನ್ನ ಮೊದಲ ಭಾನುವಾರ ಭಾರತದಲ್ಲಿ 48.5 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದೆ.

Chhaava Box Office Collection Day 3
'ಛಾವಾ' ಬಾಕ್ಸ್ ಆಫೀಸ್‌ ಕಲೆಕ್ಷನ್​​ (Photo: Film poster)
author img

By ETV Bharat Entertainment Team

Published : Feb 17, 2025, 1:41 PM IST

ಬಾಲಿವುಡ್​​ ಕಲಾವಿದರಾದ ವಿಕ್ಕಿ ಕೌಶಲ್, ಅಕ್ಷಯ್ ಖನ್ನಾ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್​​ ಕಟ್​​ ಹೇಳಿರುವ ಈ ಚಿತ್ರವು ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿಯ ಕ್ಲಬ್‌ ಪ್ರವೇಶಿಸಿದ 2025ರ ಮೊದಲ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ಹಿಸ್ಟಾರಿಕಲ್​​ ಡ್ರಾಮಾ ತನ್ನ ಮೊದಲ ದಿನದಂದು ನಿರೀಕ್ಷೆಗಳನ್ನು ಮೀರಿ ಕಲೆಕ್ಷನ್​​ ಮಾಡಿದೆ. 2ನೇ ದಿನ ಸರಿ ಸುಮಾರು ಶೇ.20ರಷ್ಟು ಏರಿಕೆ ಕಂಡಿದೆ. ಮೊದಲ ಭಾನುವಾರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಶೇ.31ರಷ್ಟು ಹೆಚ್ಚಳವಾಗಿದೆ.

2025ರ ಆರಂಭದಲ್ಲಿ ಒಂದೊಳ್ಳೆ ಬಾಕ್ಸ್​ ಆಫೀಸ್​ ಪ್ರದರ್ಶನಕ್ಕೆ ಕಾಯುತ್ತಿದ್ದ ಬಾಲಿವುಡ್​ಗೆ ಛಾವಾ ಗುಡ್​ ನ್ಯೂಸ್​ ಕೊಟ್ಟಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​​ ಮುಂದುವರಿದಿದ್ದು, ಚಿತ್ರತಂಡ ಗೆಲುವಿನ ನಗೆ ಬೀರಿದೆ. ಹೌದು, ಬಹುನಿರೀಕ್ಷಿತ ಚಿತ್ರವು ಮೂರು ದಿನಗಳಲ್ಲಿ 116.5 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದ 2025ರ ಮೊದಲ ಹಿಂದಿ ಚಿತ್ರವಾಗಿದೆ. ತನ್ನ ಮೊದಲ ಭಾನುವಾರ, ಅಂದರೆ ಕಳೆದ ದಿನ ಛಾವಾ ಭಾರತದಲ್ಲಿ 48.5 ಕೋಟಿ ರೂಪಾಯಿ (Net Collection) ಗಳಿಸಿದೆ. ಈ ಅಂಕಿ ಅಂಶ ಮೊದಲ ದಿನದ ಕಲೆಕ್ಷನ್​​​ಗೂ ಹೆಚ್ಚಿದೆ.

ಛಾವಾ ಸಿನಿಮಾದ ಗಳಿಕೆಯಲ್ಲಿ ಮಹಾರಾಷ್ಟ್ರ ಪ್ರೇಕ್ಷಕರಿಂದ ಹೆಚ್ಚಿನ ಪಾಲಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಂತಹ ದೊಡ್ಡ ನಗರಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 16, ಭಾನುವಾರದಂದು ಛಾವಾ ಚಿತ್ರ ಶೇ.62.48ರಷ್ಟು ಹಿಂದಿ ಆಕ್ಯುಪೆನ್ಸಿ ಹೊಂದಿತ್ತು.

ಛಾವಾ ಬಾಕ್ಸ್​ ಆಫೀಸ್​​ ಕಲೆಕ್ಷನ್​​:

ದಿನಇಂಡಿಯಾ ನೆಟ್​​ ಕಲೆಕ್ಷನ್​​
ಮೊದಲ ದಿನ31 ಕೋಟಿ ರೂಪಾಯಿ.
ಎರಡನೇ ದಿನ37 ಕೋಟಿ ರೂಪಾಯಿ.
ಮೂರನೇ ದಿನ48.5 ಕೋಟಿ ರೂಪಾಯಿ (ಆರಂಭಿಕ ಅಂದಾಜು).
ಒಟ್ಟು116.5 ಕೋಟಿ ರೂಪಾಯಿ.

(ಬಾಕ್ಸ್ ಆಫೀಸ್ ಅಂಕಿ-ಅಂಶದ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ವರದಿ).

ಇದನ್ನೂ ಓದಿ: ಧನ್ಯತಾ ಕೈ ಹಿಡಿದು ಧನ್ಯರಾದ ಡಾಲಿ ಧನಂಜಯ್: ಸಂಭ್ರಮದ ಫೋಟೋಗಳಿಲ್ಲಿವೆ

"ನ್ಯಾಷನಲ್ ಕ್ರಶ್" ಎಂದೇ ಕರೆಯಲ್ಪಡುವ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಈಗಾಗಲೇ ಗಡಿ ಮೀರಿ ದೇಶಾದ್ಯಂತ ವ್ಯಾಪಿಸಿದೆ. ಸರಿ ಸುಮಾರು ಒಂದು ದಶಕದ ಹಿಂದೆ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ತಾರೆಯೀಗ, ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. 'ಅನಿಮಲ್'​ನಂತಹ ಬ್ಲಾಕ್​​ಬಸ್ಟರ್ ಹಿಟ್ ಮತ್ತು ಪುಷ್ಪ ಫ್ರಾಂಚೈಸ್​​ನಂತಹ ಪ್ಯಾನ್-ಇಂಡಿಯಾ ಸಿನಿಮಾ ಮೂಲಕ ಯಶಸ್ಸು ಪಡೆದಿದ್ದಾರೆ. ತಮ್ಮ ಸಿನಿಮಾ ಆಯ್ಕೆಗಳೊಂದಿಗೆ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಇದೀಗ ಛಾವಾ ಚಿತ್ರದೊಂದಿಗೆ, ರಶ್ಮಿಕಾ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿಯಾಗಿ ತಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಮರಾಠ ರಾಣಿ ಯೇಸುಬಾಯಿ ಭೋಸಲೆ ಪಾತ್ರದಲ್ಲಿನ ಅವರ ಅಭಿನಯವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಬಹುತೇಕ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ವಿವಾಹದ ಬಳಿಕ ಧನಂಜಯ್‌ - ಧನ್ಯತಾ ಜೋಡಿ ಫಸ್ಟ್‌ ರಿಯಾಕ್ಷನ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.