'ಗ್ರಾಹಕರೇ ದೇವರು', ಮೊದಲಿಬ್ಬರು ಮದ್ಯಪ್ರಿಯರಿಗೆ ಹಾರ ಹಾಕಿ ಬರಮಾಡಿಕೊಂಡ ಬಾರ್ ಮಾಲೀಕ - ಬೆಳಗಾವಿ
🎬 Watch Now: Feature Video
40 ದಿನಗಳ ಬಳಿಕ ಮದ್ಯದಂಗಡಿ ಓಪನ್ ಆಗಿದ್ದು, ಮದ್ಯ ಖರೀದಿಗೆ ಬಂದಿದ್ದ ಮೊದಲಿಬ್ಬರು ಕುಡುಕರಿಗೆ ಬಾರ್ ಮಾಲೀಕ ಹಾರ ಹಾಕಿ ಸನ್ಮಾನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಗರದ ಆರ್ಪಿಡಿ ವೃತ್ತದಲ್ಲಿರುವ ಮಯೂರ ಬಾರ್ ಮಾಲೀಕ ಪಂಕಜ್ ಅವರು ಇಬ್ಬರು ಕುಡುಕರಿಗೆ ಹೂವಿನ ಹಾರ ಹಾಕಿದರು. ಬೆಳಗ್ಗೆ 6 ಗಂಟೆಯಿಂದಲೇ ಬಾರ್ ಮುಂದೆ ಮದ್ಯಪ್ರಿಯರು ಜಮಾಯಿಸಿದ್ದರು. 40 ದಿನಗಳ ನಂತರ ಮದ್ಯದಂಗಡಿ ಮರು ಆರಂಭ ಆಗಿದ್ದು ಮದ್ಯಪ್ರಿಯರ ಖುಷಿಗೆ ಕಾರಣವಾಗಿದೆ. ಅಲ್ಲದೇ ಲಾಕ್ಡೌನ್ನಿಂದ ಕಂಗಾಲಾಗಿದ್ದ ಬಾರ್ ಮಾಲೀಕರು ಕೂಡ ಮದ್ಯದಂಗಡಿ ತೆರೆದಿದಕ್ಕೆ ಖುಷಿಯಾಗಿದ್ದಾರೆ. ಈ ಕಾರಣಕ್ಕೆ ಬಾರ್ ಮಾಲೀಕ ಸರತಿ ಸಾಲಿನಲ್ಲಿ ನಿಂತಿದ್ದ ಇಬ್ಬರು ಮದ್ಯಪ್ರಿಯರಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡಿದ್ದಾರೆ.