ಪ್ರವಾಹ ಸಂತ್ರಸ್ತರಿಗೆ ದೊರೆಯದ ಪರಿಹಾರ ಹಣ.. ಬ್ಯಾಂಕ್ಗಳಲ್ಲಿ ಚೆಕ್ ಸ್ವೀಕರಿಸಲು ನಕಾರ.. - ವಿಜಯಪುರ
🎬 Watch Now: Feature Video

ವಿಜಯಪುರ: ಪ್ರವಾಹಕ್ಕೆ ತುತ್ತಾಗಿ ಸಕಲವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ತಾತ್ಕಾಲಿಕವಾಗಿ 10 ಸಾವಿರ ರೂ.ಪರಿಹಾರ ದನ ಘೋಷಣೆ ಮಾಡಿತ್ತು. ಆದರೆ, ದೇವೂರ ಗ್ರಾಮದ ಪ್ರವಾಹ ಸಂತ್ರಸ್ತರಾದ ಹುಲಗೆಪ್ಪ ಅಡಿವೆಪ್ಪ ಎಮ್ಮೆಟ್ಟಿ ಹಾಗೂ ಗದ್ದೆಪ್ಪ ಶರಣಪ್ಪ ಝಳಕಿ ಅವರಿಗೆ ವಿತರಿಸಲಾದ ಪರಿಹಾರದ ಚೆಕ್ ವಾಪಸ್ ಸ್ವೀಕರಿಸದೇ ವಾಪಸ್ ನೀಡಿರೋ ಬ್ಯಾಂಕ್‌ನವರು ಹಣ ಇಲ್ವೆಂದು ಸಬೂಬು ಹೇಳಿದ್ದಾರಂತೆ. ಅಗಸ್ಟ್ 14ರಂದು ಮುದ್ದೇಬಿಹಾಳ ತಾಲೂಕಿನ ದೇವೂರಿನ ಸಂತ್ರಸ್ತರಿಗೆ ತಾತ್ಕಾಲಿಕವಾಗಿ 10 ಸಾವಿರ ರೂ. ಪರಿಹಾರ ಧನ ನೀಡಿದ್ದರು. ಮುದ್ದೇಬಿಹಾಳ ತಾಲೂಕಿನ ಕೋಳೂರು ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳು ಸಂತ್ರಸ್ತರ ಚೆಕ್ ಸ್ವೀಕರಿಸದೆ ವಾಪಸ್ ಕಳಿಸಿದ್ದಾರೆ.