ದೇಶಾದ್ಯಂತ ಬ್ಯಾಂಕ್ ಬಂದ್: ಉಡುಪಿಯಲ್ಲಿ ಬ್ಯಾಂಕಿಂಗ್ ವಹಿವಾಟು ಸ್ಥಬ್ಧ - Udupi News
🎬 Watch Now: Feature Video
ದೇಶದಾದ್ಯಂತ ವೇತನ ಪರಿಷ್ಕರಣೆ, ಸಮಾನ ಪಿಂಚಣಿ ಸಹಿತ 12 ಬೇಡಿಕೆಗಳನ್ನು ಮುಂದಿಟ್ಟು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬ್ಯಾಂಕಿಂಗ್ ವಹಿವಾಟು ಬಹುತೇಕ ಸ್ಥಬ್ಧಗೊಂಡಿದೆ. ಬ್ಯಾಂಕ್ ಯೂನಿಯನ್ಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಧರಣಿ ಮಾಡಿದ ನೌಕರರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ನೂರಾರು ಬ್ಯಾಂಕ್ ಉದ್ಯೋಗಿಗಳು ಪ್ರತಿಭಟನೆಯಲ್ಲಿ ಭಾಗಿಯಾದ್ದರಿಂದ ಬಹುತೇಕ ರಾಷ್ಟ್ರೀಕೃತ ಬ್ಯಾಂಕ್ಗಳು ಇವತ್ತು ಬಾಗಿಲು ಹಾಕಿವೆ. ಆದರೆ ನಗರದ ಎಲ್ಲ ಖಾಸಗಿ ಬ್ಯಾಂಕುಗಳು ಓಪನ್ ಆಗಿದ್ದು ಗ್ರಾಹಕರಿಗೆ ಎಂದಿನಂತೆ ಸೇವೆ ನೀಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳು ಇಂದಿನಿಂದ ಮೂರು ದಿನಗಳ ಕಾಲ ಬಂದ್ ನಡೆಸುವುದರಿಂದ ವಾರಾಂತ್ಯದಲ್ಲಿ ಗ್ರಾಹಕರಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲ ಎಟಿಎಂಗಳಲ್ಲಿ ನಗದು ತುಂಬಲಾಗಿದ್ದು ಗ್ರಾಹಕರು ತುಸು ನಿಟ್ಟುಸಿರು ಬಿಡುವಂತಾಗಿದೆ.