ಸಂಕ್ರಾಂತಿ ಹಬ್ಬದ ಖರೀದಿ ಜೋರು: ಮಾರುಕಟ್ಟೆಯಲ್ಲಿ ಗಿಜಿಗುಡುತ್ತಿರುವ ಗ್ರಾಹಕರು! - Bangalore Market full for Sankranti festival,
🎬 Watch Now: Feature Video
ಸಂಕ್ರಾಂತಿ ಹಬ್ಬದ ಹಿನ್ನಲೆ ಇಂದಿನಿಂದಲೇ ಸಿಟಿ ಮಾರ್ಕೆಟ್ ಗ್ರಾಹಕರಿಂದ ತುಂಬಿ ಗಿಜಿಗುಡುತ್ತಿದೆ. ಕಬ್ಬು, ತರಕಾರಿ, ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿದೆ. ಹದಿನೈದರಂದು ಸಂಕ್ರಾಂತಿ ಹಬ್ಬ ನಡೆಯಲಿದ್ದು, ನಾಳೆಯಿಂದಲೇ ಕೆಲವು ಪೂಜಾ ವಿಧಾನಗಳು ನಡೆಯೋದ್ರಿಂದ ಹಬ್ಬದ ಖರೀದಿ ಇಂದೇ ಜೋರಾಗಿದೆ. ಇಂದು ಸಂಜೆಯಿಂದ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಹೂವಿನ ಬೆಲೆ, ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಕೈಬಿಸಿ ಮಾಡಿದೆ. ನಾಳೆ ಹೂವಿನ ಬೆಲೆಯಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಮಾರುಕಟ್ಟೆಯ ವಹಿವಾಟು ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.