ಶ್ರೀಕೃಷ್ಣ ಜನ್ಮಾಷ್ಠಮಿ: ಬಾಲ ಕೃಷ್ಣ-ರಾಧೆಯರ ಕ್ಯಾಟ್ ವಾಕ್ - ವೇಷ ಭೂಷಣ ಸ್ಪರ್ಧೆ
🎬 Watch Now: Feature Video

ಬೆಂಗಳೂರು: ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಾಗರಭಾವಿಯ ಡ್ರೀಮ್ ಜೋನ್ ಸ್ಕೂಲ್ ಆಫ್ ಸ್ಟಡೀಸ್ ವತಿಯಿಂದ ಮಕ್ಕಳಿಗಾಗಿ ಶ್ರೀಕೃಷ್ಣ, ರುಕ್ಮಿಣಿ ವೇಷ ಭೂಷಣ ಸ್ಪರ್ಧೆ, ಫ್ಯಾಷನ್ ಶೋ ಏರ್ಪಡಿಸಿದ್ರು. ಇನ್ನೂ ಈ ಕಾರ್ಯಕ್ರಮದಲ್ಲಿ ಸುಮಾರು 35ಕ್ಕೂ ಹೆಚ್ಚು ಪುಟಾಣಿ ಕೃಷ್ಣ-ರುಕ್ಮಿಣಿಯರು ಭಾಗವಹಿಸಿದ್ರು. ಅಲ್ಲದೆ ಕೊಳಲ ಹಿಡಿದು ಬಾಲ ಕೃಷ್ಣಂದಿರು ಕ್ಯಾಟ್ ವಾಕ್ನಲ್ಲಿ ಮಿಂಚಿದ್ರು. ಪುಟಾಣಿಗಳಿಗಾಗಿ ಪೇಂಟಿಂಗ್ ಕಾಂಪಿಟೇಷನ್ನನ್ನು ಡ್ರೀಮ್ ಜೋನ್ ಸ್ಕೂಲ್ ಆಫ್ ಸ್ಟಡೀಸ್ ಏರ್ಪಡಿಸಿತ್ತು. ಇನ್ನೂ ಕಾಂಪಿಟೇಷನ್ಗೆ ಪೋಷಕರು ತಮ್ಮ ಪುಟಾಣಿ ಮಕ್ಕಳನ್ನು ಭರ್ಜರಿಯಾಗಿ ರೆಡಿ ಮಾಡಿಕೊಂಡು ಬಂದಿದ್ರು.