'ರೈತರ ಬಂದ್ಗೆ ನಿಮ್ಮ ಬೆಂಬಲ ಇಲ್ವಾ?': ವಾಹನ ಸವಾರರ ವಿರುದ್ಧ ಆಕ್ರೋಶ - ರಸ್ತೆಗಿಳಿದ ವಾಹನಗಳ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ
🎬 Watch Now: Feature Video
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ್ ಬಂದ್ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದ ಬಳಿ ರೈತರು ರಸ್ತೆ ತಡೆ ಮಾಡಿ, ಪ್ರತಿಭಟನೆ ನಡೆಸಿದರು. ಈ ವೇಳೆ ವಾಹನಗಳನ್ನು ತಡೆದು ನಿಲ್ಲಿಸಿ, ಸವಾರರ ವಿರುದ್ಧ ಕಿಡಿಕಾರಿದರು. ಇವತ್ತು ಭಾರತ್ ಬಂದ್ ಇದೆ ಅನ್ನೋದು ನಿಮಗೆ ಗೊತ್ತಿಲ್ವಾ?, ರೈತರ ಬಂದ್ಗೆ ನಿಮ್ಮ ಬೆಂಬಲ ಇಲ್ವಾ?ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ರು. ಗುಳೇದಗುಡ್ಡ, ಇಳಕಲ್, ಹುನಗುಂದ,ಅಮೀನಗಡ,ಕಮತಗಿ ರಸ್ತೆ ತಡೆ ಮಾಡಿ, ಪ್ರತಿಭಟನೆ ನಡೆಸಿದರು. ಹುನಗುಂದ ಭಾಗಕ್ಕೆ ಎಂಟ್ರಿ ಕೊಡುವ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.