ಧಾರವಾಡ: ಕೊರೊನಾ ವೇಷ ಧರಿಸಿ ವ್ಯಕ್ತಿಯಿಂದ ಜಾಗೃತಿ ಕಾರ್ಯ - ಧಾರವಾಡದಲ್ಲಿ ಕೊರೊನಾ ವೇಷ ಧರಿಸಿ ವ್ಯಕ್ತಿಯಿಂದ ಜಾಗೃತಿ ಕಾರ್ಯ
🎬 Watch Now: Feature Video

ಧಾರವಾಡ: ಕೊರೊನಾ ವೈರಸ್ ನಿಯಂತ್ರಣ ಮಾಡಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಅತ್ಯಗತ್ಯ. ಈ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿರಂತರ ಪ್ರಯತ್ನ ಮಾಡುತ್ತಿವೆ. ಆದರೆ ಜಿಲ್ಲೆಯಲ್ಲಿ ಡಿಸಿ ಆದೇಶದ ಮೇರೆಗೆ ಕಲಾವಿದರೊಬ್ಬರಿಗೆ ಕೊರೊನಾ ವೇಷ ಹಾಕಿಸಿ ಜನಸಂದಣಿ ಇರುವ ಕಡೆಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ. ಅಂತಹವರನ್ನು ಕೊರೊನಾ ತಪಾಸಣೆಗೆ ಒಳಪಡಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ನಾದ ಝೇಂಕಾರ ಸಂಸ್ಥೆಯ ಯಮನಪ್ಪ ಜಾಲಗಾರ ತಮ್ಮ ತಂಡದ ಬಸವರಾಜ ಗುಡ್ಡಪ್ಪನವರ ಅವರಿಗೆ ಕೊರೊನಾ ವೇಷ ಧರಿಸಿದ್ದು, ಪ್ರಸಾದನ ಕಲಾವಿದ ಸಂತೋಷ ಮಹಾಲೆ ಈ ವೇಷಭೂಷಣ ಸಿದ್ಧಪಡಿಸಿದ್ದಾರೆ.