ಬಸ್ ನಿಲ್ದಾಣದ ಆವರಣದಲ್ಲಿ ಕಬಡ್ಡಿ ಆಡಿ ಆಟೋ ಚಾಲಕರ ಅಸಮಾಧಾನ - ಗದಗ
🎬 Watch Now: Feature Video
ಗದಗ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವ ಗದಗದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಆಟೋ ಚಾಲಕರು ಕಬ್ಬಡಿ ಆಡಿದರು. ಕಳೆದ ಎರಡು ದಿನಗಳಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಹೀಗಾದರೆ ನಮ್ಮ ಹೊಟ್ಟೆಪಾಡು ನಡೆಯುವುದು ಹೇಗೆ?, ಈ ಕಾರಣಕ್ಕಾಗಿ ಖಾಲಿ ಇರುವ ಬಸ್ ನಿಲ್ದಾಣದ ಆವರಣದಲ್ಲಿ ಕಬಡ್ಡಿ ಆಡಿದ್ದೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಜೊತೆಗೆ ಆಟೋ ಚಾಲಕ ಕುಟುಂಬವನ್ನು ಉಳಿಸಿ ಎಂದು ಚಾಲಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.