ಪ್ರಚಾರದ ವೇಳೆ ಯಶ್ ಅಭಿಮಾನಿಗಳ ಅಭಿಮಾನ: ಸೇಬಿನ ಹಾರ ಹಾಕಿ ಸ್ವಾಗತ - Yash
🎬 Watch Now: Feature Video
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗುತ್ತಿದೆ. ಇನ್ನು ನಟ ಯಶ್ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಭರ್ಜರಿ ಪ್ರಚಾರ ನಡೆಸಿದ್ದು ತಮಗೆಲ್ಲ ಗೊತ್ತು. ಇನ್ನು ಎರಡು ದಿನಗಳ ವಿಶ್ರಾಂತಿ ನಂತರ ಮತ್ತೆ ಫೀಲ್ಡ್ಗೆ ಇಳಿದ ಯಶ್, ನಾಗಮಂಗಲ ವಿಧಾನಸಭಾ ಕ್ಷೇತ್ರ ಸೇರಿದಂತೆ ಮದ್ದೂರು ತಾಲೂಕಿನ ಕೊಪ್ಪ, ಕೀಳಘಟ್ಟ, ದೇವಲಾಪುರ ಭಾಗಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ನೂರಾರು ಅಭಿಮಾನಿಗಳು ಹಾಗೂ ಗ್ರಾಮಸ್ಥರು ಕ್ರೇನ್ ಮೂಲಕ ಹೂವುಗಳನ್ನು ಸುರಿಸಿ, ಸೇಬಿನ ಹಾರ ಹಾಕುವ ಮೂಲಕ ಸ್ವಾಗತ ಕೋರಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.