ತುಮಕೂರು: ಹಸಿವಿನಿಂದ ಬಳಲುತ್ತಿದ್ದ ಭಿಕ್ಷುಕಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಎಎಸ್ಐ - ತುಮಕೂರು ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6551064-133-6551064-1585222986817.jpg)
ತುಮಕೂರು: ಕೊರೊನಾ ವೈರಸ್ ಹಿನ್ನೆಲೆ ದೇಶ ಲಾಕ್ಡೌನ್ ಆಗಿದೆ. ಹಾಗಾಗಿ ಆಹಾರ ಸಿಗದೆ ಹಸಿವಿನಿಂದ ಬಳಲುತ್ತಿದ್ದ ಭಿಕ್ಷುಕಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ಎಎಸ್ಐ ಮಂಜುನಾಥ್ ಎಂಬುವರು ಕೊರಟಿಗೆರೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಅನ್ನವಿಲ್ಲದೆ ಕುಳಿತಿದ್ದ ಭಿಕ್ಷುಕಿಗೆ ತಮ್ಮ ಬೈಕ್ನಲ್ಲಿದ್ದ ಆಹಾರ ಪೊಟ್ಟಣ, ನೀರನ್ನು ಕೊಟ್ಟಿದ್ದಾರೆ. ಅಲ್ಲದೆ ಅನ್ನವನ್ನು ವ್ಯರ್ಥ ಮಾಡದಂತೆ ತಿಳಿಹೇಳಿದ್ದಾರೆ.