ಪೌಷ್ಠಿಕ ಆಹಾರ ದುರುಪಯೋಗ ಪ್ರಕರಣ- ಆರೋಪಿಗಳ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

🎬 Watch Now: Feature Video

thumbnail
ಆನೇಕಲ್​(ಬೆಂಗಳೂರು): ಸರ್ಕಾರ ಮಕ್ಕಳು ಮತ್ತು ಗರ್ಭಿಣಿಯರಿಗೆ ಹಂಚುವ ಪೌಷ್ಠಿಕ ಆಹಾರದ ಪೊಟ್ಟಣಗಳ ಮೇಲೆ ಬಿಜೆಪಿ ಚಿಹ್ನೆ ಹಾಗೂ ನಾಯಕರ ಹೆಸರನ್ನ ಮುದ್ರಿಸಿ ಹಂಚಲು ಮುಂದಾಗಿದ್ದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸರ್ಜಾಪುರ ಎಂಎಸ್​ಪಿಸಿ ಸಂಸ್ಥೆಯಲ್ಲಿ ಸರ್ಕಾರ ಪೌಷ್ಠಿಕ ಆಹಾರವನ್ನ ಬಿಜೆಪಿ ಪಾಕೇಟ್​ನ​ಲ್ಲಿ ತುಂಬುತ್ತಿದ್ದ ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಶಾಸಕ ಬಿ ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬೆಳಗ್ಗೆ ಆನೇಕಲ್ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಆರೋಪಿಗಳನ್ನು ಬಂಧಿಸದಿರುವ ಕ್ರಮವನ್ನು ಸಾಂಕೇತಿಕವಾಗಿ ಖಂಡಿಸಿದರು. ಇದೇ ಸಂದರ್ಭದಲ್ಲಿ ಕೊರೊನಾ ಸಂದರ್ಭದಲ್ಲಿ ವಿಧಿಸಿರುವ ನಿಷೇಧಾಜ್ಞೆ ಪಾಲಿಸದೆ ನಡೆಸಿದ ವಿರೋಧದಿಂದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
Last Updated : May 5, 2020, 7:55 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.