ದೊಡ್ಡಬಳ್ಳಾಪುರ: ಮನೆ ಮಾಲೀಕ ಮನೆಯೊಳಗಿದ್ದಾಗಲೇ ಕಾಂಪೌಂಡ್‌ನೊಳಗೆ ಪ್ರವೇಶಿಸಿ ಸ್ಕೂಟರ್ ಕಳವು ಮಾಡಿ ಪರಾರಿಯಾಗಿದ್ದ ಮುಸುಕುಧಾರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ ಬಂಧಿತ ಆರೋಪಿ. ಈತ ಕೃತ್ಯ ಎಸಗಿದ ಮನೆಯಲ್ಲಿ ಬಾಡಿಗೆದಾರನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಹೊರವಲಯದ ಕುರುಬರಹಳ್ಳಿಯಲ್ಲಿ ಕಳೆದ ಗುರುವಾರ ಸಂಜೆ 5 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಶಿವಕುಮಾರ್ ಹುಲಿಕುಂಟೆ ಗ್ರಾಮದ ನಿವಾಸಿಯಾಗಿದ್ದು, ಇತ್ತೀಚೆಗಷ್ಟೇ ಮನೆ ಖಾಲಿ ಮಾಡಿದ್ದ. ಮಾಲೀಕರು ಮರೆತು ಬಿಟ್ಟುಹೋಗಿದ್ದ ಸ್ಕೂಟರ್ ಕೀ ತೆಗೆದುಕೊಂಡಿದ್ದ ಈತ, ಮನೆ ಖಾಲಿ ಮಾಡಿದ ನಂತರ ಮುಸುಕುಧಾರಿಯಾಗಿ ಬಂದು ಕಳವು ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಾಳಿ ಆಂಜನೇಯ ದೇವಸ್ಥಾನದ ಹುಂಡಿ ಹಣ ಕಳವು; ಅರ್ಚಕ, ಟ್ರಸ್ಟಿಗಳ ವಿರುದ್ಧ ಎಫ್‌ಐಆರ್ - Gali Anjaneya Temple