ಕೀನ್ಯಾ ತಲುಪಿದ ಐಎನ್‌ಎಸ್ ಐರಾವತ್: ದಕ್ಷಿಣ ಸುಡಾನ್ ಜನರಿಗೆ ಆಹಾರ ಸಾಮಗ್ರಿ ವಿತರಣೆ - ದಕ್ಷಿಣ ಸೂಡಾನ್ಗೆ ಹಡಗಿನ ಮೂಲಕ ಭಾರತದಿಂದ ಆಹಾರ ಸಾಗಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9612646-thumbnail-3x2-sagar.jpg)
ನವೆಂಬರ್ 20 ರಂದು ಮಾನವೀಯ ಮಿಷನ್ ‘ಸಾಗರ್- II’ ನ ಭಾರತೀಯ ನೌಕಾ ಹಡಗು ಐರಾವತ್ ಕೀನ್ಯಾದ ಪೋರ್ಟ್ ಆಫ್ ಮೊಂಬಾಸಾ ತಲುಪಿದೆ. ನೈಸರ್ಗಿಕ ವಿಪತ್ತುಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟು ನಿವಾರಣೆಗೆ ಭಾರತ ಸರ್ಕಾರವು ತನ್ನ ಸ್ನೇಹಯುತ ವಿದೇಶಗಳಿಗೆ ನೆರವು ನೀಡುತ್ತಿದೆ ಮತ್ತು ಅದೇ ಉದ್ದೇಶಕ್ಕೆ ಐಎನ್‌ಎಸ್ ಐರಾವತ್ ಮೂಲಕ ದಕ್ಷಿಣ ಸುಡಾನ್ ಜನರಿಗೆ ಆಹಾರ ಸಾಮಗ್ರಿ ಸಾಗಿಸಲಾಗ್ತಿದೆ. ಈ ಸಾಗರ್- II ಮಿಷನ್ ದಕ್ಷಿಣ ಸುಡಾನ್‌ನೊಂದಿಗಿನ ಭಾರತದ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ. ಭಾರತೀಯ ನೌಕಾಪಡೆ ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಇತರ ಏಜೆನ್ಸಿಗಳೊಂದಿಗೆ ಸಮನ್ವಯದಿಂದ ಈ ಕಾರ್ಯಾಚರಣೆ ಮುಂದುವರಿಸುತ್ತಿದೆ.