ಗುರುಗುಂಟಾ ಮತಗಟ್ಟೆಯಲ್ಲಿ ಎರಡು ಗುಂಪಿನ ಮುಖಂಡರ ಮಧ್ಯೆ ವಾಗ್ವಾದ - grampanchayath election
🎬 Watch Now: Feature Video
ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಮತಗಟ್ಟೆಯಲ್ಲಿ ಮುಖಂಡರ ಮಧ್ಯೆ ವಾಗ್ವಾದ ನಡೆದಿದೆ. ಗುರುಗುಂಟಾ ವಾರ್ಡ್ 9 ಮತ್ತು 4ರಲ್ಲಿ ಅನ್ಯ ಗ್ರಾಮದಲ್ಲಿ ವಾಸಿಸುವ ಮತದಾರರು ಸಂಬಂಧಿಗೆ ಮತ ಹಾಕಲು ಬಂದಾಗ ವಾಗ್ವಾದ ನಡೆದಿದೆ. ಎರಡೆರಡು ಪಂಚಾಯಿತಿಗಳಲ್ಲಿ ಮತ ಹೊಂದಿದ್ದು, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಒಂದು ಗುಂಪು ವಿರೋಧ ವ್ಯಕ್ತಪಡಿಸಿತು. ಎರಡೂ ಗುಂಪಿನ ಮುಖಂಡರು ಪರಸ್ಪರ ಮಾತುಕತೆ ನಡೆಸಿ, ನಂತರ ನ್ಯಾಯಯುತವಾಗಿ ಈ ಮತಗಟ್ಟೆಯಲ್ಲಿ ಹೆಸರು ಇದ್ದವರು ಮತ ಹಾಕಬೇಕು ಉಳಿದವರು ವಾಪಸ್ ಹೋಗುವಂತೆ ಹೇಳಿ ಸಮಾಧಾನ ಪಡಿಸಿದರು.