ಕಲಬುರಗಿಯಿಂದ ಮುಂಬೈಗೆ ವಿಮಾನ ಸೇವೆ ಆರಂಭ: ಜಲಫಿರಂಗಿ ಮೂಲಕ ಲೋಹದ ಹಕ್ಕಿಗೆ ಸ್ವಾಗತ - Kalaburagi - Mumbai flight

🎬 Watch Now: Feature Video

thumbnail

By

Published : Mar 25, 2021, 4:26 PM IST

ಕಲಬುರಗಿ:ಅಲಯನ್ಸ್ ಏರ್ ಸಂಸ್ಥೆ ಕಲಬುರಗಿ ಜನರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಕಲ್ಯಾಣ ಕರ್ನಾಟಕದ ಜನತೆಗೆ ಮುಂಬೈ ಇದೀಗ ಮತ್ತಷ್ಟು ಹತ್ತಿರವಾಗಿದೆ. ಇಂದಿನಿಂದ ಕಲಬುರಗಿ - ಮುಂಬೈ ನಡುವೆ ಲೋಹದ ಹಕ್ಕಿ ಹಾರಾಟ ಶುರುಮಾಡಿದೆ.‌ ವಾರದ ಏಳು ದಿನವೂ ವಿಮಾನ ಸೇವೆ ಲಭ್ಯವಿರಲಿದೆ. ಬೆಳಗ್ಗೆ 9:07 ಕ್ಕೆ ಮುಂಬೈನಿಂದ ಆಗಮಿಸಿದ ವಿಮಾನಕ್ಕೆ ಜಲ ಫಿರಂಗಿ ಮೂಲಕ ಸ್ವಾಗತಿಸಲಾಯಿತು. ಮತ್ತೆ 9:40ಕ್ಕೆ ಕಲಬುರಗಿಯಿಂದ ವಿಮಾನ ಮತ್ತೆ ಮುಂಬೈನತ್ತ ಸಾಗಿತು. 70 ಆಸನಗಳ ಸಾಮರ್ಥ್ಯವುಳ್ಳ ವಿಮಾನ ಇದಾಗಿದ್ದು, ದೇಶದ ಪ್ರಮುಖ ವಾಣಿಜ್ಯ ನಗರಿಗೆ ವಿಮಾನ ಹಾರಾಟ ಮಾಡುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.