ಉಪಚುನಾವಣೆಗೆ ಹಣ ಹಂಚಿಕೆ ಆರೋಪ: ವ್ಯಕ್ತಿ ಮೇಲೆ ಗ್ರಾಮಸ್ಥರ ದಾಳಿ - ಉಪ ಚುನಾವಣೆ
🎬 Watch Now: Feature Video

ಬಸವಕಲ್ಯಾಣ (ಬೀದರ್): ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಪಕ್ಷದಿಂದ ಮತದಾರರಿಗೆ ಹಣ ಹಂಚಿಕೆ ಮಾಡಲಾಗುತ್ತಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ, ಹಣ ಕಸಿದುಕೊಂಡ ಘಟನೆ ತಾಲೂಕಿನ ಭೋಸ್ಗಾ ಗ್ರಾಮದಲ್ಲಿ ಜರುಗಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಅನ್ಯ ಗ್ರಾಮದಿಂದ ಬಂದ ವ್ಯಕ್ತಿಯೊಬ್ಬರು ಮತದಾರರಿಗೆ ಹಣ ಹಂಚುತಿದ್ದಾರೆ ಎನ್ನುವ ಸಂಶಯದ ಮೇಲೆ ವ್ಯಕ್ತಿ ಮೇಲೆ ದಾಳಿ ನಡೆಸಿದ ಗ್ರಾಮಸ್ಥರು, ಆತನಿಂದ ಹಣ ಕಸಿದುಕೊಂಡು, ಕೆಲವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
Last Updated : Apr 15, 2021, 9:28 PM IST