ಕೆಂಡದ ಮೇಲೆ ನಡೆದು ಅಗ್ನಿ ಸೇವೆ ಸಲ್ಲಿಸಿದ ಕುಷ್ಟಗಿಯ ಗುರು ಸ್ವಾಮಿ - kushtagi kishor swami
🎬 Watch Now: Feature Video
ಕುಷ್ಟಗಿ(ಕೊಪ್ಪಳ): ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಸಂದರ್ಭದಲ್ಲಿ ಕುಷ್ಟಗಿಯ ಗುರು ಸ್ವಾಮಿಗಳಾದ ಕಿಶೋರ್ ಸ್ವಾಮಿ ಹಿರೇಮಠ ಅವರು, ಕೆಂಡದಲ್ಲಿ ನಡೆದು ಅಗ್ನಿ ಸೇವೆ ಸಲ್ಲಿಸಿದ್ದಾರೆ. ತಾಲೂಕಿನ ವಣಗೇರಾ ಗ್ರಾಮದಲ್ಲಿ ಆಯೋಜಿಸಿದ್ದ ಮಹಾಪೂಜಾ ಕಾರ್ಯಕ್ರಮದಲ್ಲಿ ಗುರು ಸ್ವಾಮಿಗಳಾದ ಕಿಶೋರ್ ಸ್ವಾಮಿಗಳು ಎರಡು ಟ್ರ್ಯಾಕ್ಟರ್ ಕಟ್ಟಿಗೆಯ ಕೆಂಡದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಸ್ತುತಿಸುತ್ತಾ ಕುಂಡದಲ್ಲಿ ಅಗ್ನಿ ಸೇವೆ ಸಲ್ಲಿದರು. ಭಾವಪರವಶರಾಗಿ ಶ್ರೀ ಆಯ್ಯಪ್ಪಸ್ವಾಮಿ ಮಾಲಾಧಾರಿಗಳು ಈ ಸೇವೆ ಸಲ್ಲಿಸಿದರು. ಕಿಶೋರ್ ಸ್ವಾಮಿಗಳು ಮಾತನಾಡಿ, ಈ ಸೇವೆ ಪವಾಡ ಅಲ್ಲ. ಅಯ್ಯಪ್ಪ ಸ್ವಾಮಿಯ ಪೂಜಾ ಕೈಂಕರ್ಯಗಳಲ್ಲಿ ಒಂದು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾದ ಮೇಲೆ ಬರಿಗಾಲಲ್ಲಿ ಇರುವ ಕಾರಣ ಪಾದ ಬಿರುಸಾಗಿದ್ದು, ಬೆಂಕಿಯ ಸ್ಪರ್ಶ ಕೂಡಲೇ ಆಗುವುದಿಲ್ಲ. ಈ ಸೇವೆ ವೈಜ್ಞಾನಿಕವಾಗಿದ್ದು ಬೆಂಕಿ ಕೆಂಡದ ಮೇಲೆ ಪಾದ ಇಟ್ಟು ಮುಂದೆ ಸಾಗಿದರೆ ಏನೂ ಆಗದು. ಭಕ್ತಾದಿಗಳು ಜಾಗ್ರತೆಯಿಂದ ಮಾಡಬೇಕಾದ ಕಠಿಣ ಸೇವೆ ಇದಾಗಿದೆ ಎಂದಿದ್ದಾರೆ.