ಕಾಫೀ ನಾಡಿನಲ್ಲಿ ಮತ್ತೆ ವರುಣನ ಅಬ್ಬರ, ಜನಜೀವನ ದುಸ್ತರ - again heavy rain in chikkamagaluru district
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4346525-thumbnail-3x2-.jpg)
ಚಿಕ್ಕಮಗಳೂರು: ಕಾಫೀ ನಾಡಿನ ಜನರನ್ನು ಮಳೆರಾಯ ಮತ್ತೊಮ್ಮೆ ಸಂಕಷ್ಟಕ್ಕೆ ದೂಡಿದ್ದಾನೆ. ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಮೂಡಿಗೆರೆ ತಾಲೂಕಿನ ಚೆನ್ನಡ್ಲು ಗ್ರಾಮದಲ್ಲಿ ಮಹಾಮಳೆಗೆ ಗುಡ್ಡ ಕುಸಿದಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫೀ, ಸಿಲ್ವರ್ ಗಿಡಗಳು ನೆಲಸಮವಾಗಿವೆ. ಇಲ್ಲಿನ ಜನರು ಗ್ರಾಮದ ಸ್ಥಳಾಂತರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಮಳೆಯಿಂದಾದ ಅನಾಹುತದ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಅಲ್ಲಿನ ಜನರ ಸಂಕಷ್ಟ ಏನು ಅನ್ನೋದರ ಕುರಿತು ಪ್ರತ್ಯಕ್ಷ ಮಾಡಿದ್ದಾರೆ.