ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಹೋರಾಟಕ್ಕೆ ಭಾಗಿಯಾಗ್ತೇವೆ: ಡಾ.ಯತೀಂದ್ರ ಸ್ಪಷ್ಟನೆ - ಕುರುಬ ಸಮಾಜ ಮೀಸಲಾತಿ ಹೋರಾಟ ಕುರಿತು ಯತೀಂದ್ರ ಹೇಳಿಕೆ
🎬 Watch Now: Feature Video
ಮೈಸೂರು: ಕುರುಬ ಸಮಾಜದವರು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜಿಪಿ ಸರ್ಕಾರ ಇದೆ. ಅವರ ವಿರುದ್ಧ ಹೋರಾಟ ಮಾಡ್ತಾರೆ ಅಂದ್ರೆ ಅದು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರನ್ನ ವಿರೋಧ ಮಾಡ್ಬೇಕು ಅನ್ನೋ ಉದೇಶ ಹೆಚ್ಚಾಗಿರೋ ಹಾಗೆ ಕಾಣಿಸುತ್ತಿದೆ. ನಿಜವಾಗ್ಲೂ ಸಮುದಾಯಕ್ಕೆ ಒಳ್ಳೆಯದು ಮಾಡಬೇಕು ಅಂದ್ರೆ ಅದನ್ನ ಒಂದು ಪೊಲಿಟಿಕಲ್ ಪ್ಲಾಟ್ ಫಾರ್ಮ್ ಮಾಡಬಹುದು. ಎಲ್ಲರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಆತುರವಾಗಿ ಸಮುದಾಯದ ಒಗ್ಗಟ್ಟನ್ನ ಒಡೆಯಬೇಕು ಅಂತ ಇಂತ ಕೆಲ್ಸ ಮಾಡ್ತಿದಾರೆ. ಹಾಗಾಗಿ ನಾನು ಈ ಹೋರಾಟದಲ್ಲಿ ಭಾಗಿಯಾಗುವ ಪ್ರಶ್ನಿಯೇ ಇಲ್ಲ. ಯಾವತ್ತೂ ಎಲ್ಲರೂ ಸಂಪೂರ್ಣವಾಗಿ, ಪ್ರಾಮಾಣಿಕವಾಗಿ ಎ ಪ್ಲಾಟ್ ಫಾರ್ಮ್ ಮಾಡುತ್ತಾರೋ ಅವಾಗ ಮಾತ್ರ ನಾವು ಭಾಗಿಯಾಗುತ್ತೇವೆ ಎಂದು ಮಾಜಿ ಸಿಎಂ ಪುತ್ರ, ಶಾಸಕ ಡಾ.ಯತೀಂದ್ರ ಅವರು ಹೇಳಿದರು.