ಧಾರವಾಡ ಅಪಘಾತ ಪ್ರಕರಣ: ರಸ್ತೆ ಸುರಕ್ಷತೆ ಕುರಿತು ಸೂಕ್ತ ಕ್ರಮ - ADGP take action on road safety measures in dharwad
🎬 Watch Now: Feature Video

ಧಾರವಾಡ: ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿ 11 ಜನ ಮೃತಪಟ್ಟಿದ್ದ ಹಿನ್ನೆಲೆ ಇಂದು ಧಾರವಾಡದಲ್ಲಿ ಬೈಪಾಸ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆ ನಡೆಸಲಾಗಿದೆ ಎಂದು ಎಡಿಜಿಪಿ ಪ್ರತಾಪ ರೆಡ್ಡಿ ಹೇಳಿದರು. ರಸ್ತೆ ಸುರಕ್ಷತೆ ಕುರಿತು ಜಿಲ್ಲಾಧಿಕಾರಿ, ಹು-ಧಾ ಪೊಲೀಸ್ ಕಮಿಷನರ್, ಎಸ್ಪಿ ಹಾಗೂ ಇತರೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಮುಂದಿನ 15 ದಿನಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.