ಆನೆಗುಂದಿ ಉತ್ಸವ: ಎಲ್ಲರ ಗಮನ ಸೆಳೆದ ಸ್ಲೋ ಸೈಕ್ಲಿಂಗ್ ಸ್ಪರ್ಧೆ - ಆನೆಗುಂದಿ ಉತ್ಸವ
🎬 Watch Now: Feature Video
ಕೊಪ್ಪಳ: ಇದೇ 9 ಮತ್ತು 10ರಂದು ಎರಡು ದಿನಗಳ ಕಾಲ ನಡೆಯಲಿರುವ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಆನೆಗುಂದಿ ಉತ್ಸವದ ಹಿನ್ನೆಲೆ ಈಗಾಗಲೇ ವಿವಿಧ ಕ್ರೀಡಾ ಚಟುವಟಿಕೆಗಳು ಆರಂಭಗೊಂಡಿದ್ದು, ಇಂದು ಶ್ರೀ ಕೃಷ್ಣದೇವರಾಯ ವೇದಿಕೆಯ ಮುಂಭಾಗದಲ್ಲಿ ಸ್ಲೋ ಸೈಕ್ಲಿಂಗ್ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ನೂರಾರು ಯುವಕರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಬಸವನದುರ್ಗದ ವೆಂಕಟೇಶಬಾಬು ಪ್ರಥಮ, ಗಂಗಾವತಿಯ ಭೋಗಪ್ಪ ದ್ವಿತೀಯ ಹಾಗೂ ವೀರನಗೌಡ ಕುಲಕರ್ಣಿ ಎಂಬುವವರು ತೃತೀಯ ಸ್ಥಾನ ಪಡೆದುಕೊಂಡರು.