ರಸ್ತೆಯಲ್ಲಿ ಕಾರಿನೆದುರು ಪ್ರತ್ಯಕ್ಷವಾದ ಹುಲಿ... ವಿಡಿಯೋ ವೈರಲ್ - ಕಾರವಾರ ಹುಲಿ ನ್ಯೂಸ್
🎬 Watch Now: Feature Video
ಕಾರವಾರ: ಕೈಗಾ ಯಲ್ಲಾಪುರ ರಸ್ತೆಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿ ಕಾರಿನಲ್ಲಿದ್ದ ಕುಟುಂಬವೊಂದು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಾರವಾರದಿಂದ ಕೈಗಾ ಹರೂರು ಮೂಲಕ ಯಲ್ಲಾಪುರಕ್ಕೆ ಕಾರಿನಲ್ಲಿ ಹೋಗುತ್ತಿದ್ದ ಕುಟುಂಬವೊಂದಕ್ಕೆ ರಸ್ತೆಯಲ್ಲಿ ಹುಲಿ ನಡೆದುಕೊಂಡು ಹೋಗುತ್ತಿರುವುದು ಕಂಡಿದೆ. ತಕ್ಷಣ ಕಾರು ನಿಲ್ಲಿಸಿ, ನಿಧಾನವಾಗಿ ಹುಲಿಯ ಹಿಂದೆ ಕಾರು ಚಲಾಯಿಸಿಕೊಂಡು ತೆರಳಿದ್ದರು. ಒಮ್ಮೆ ಭಯಭೀತರಾಗಿದ್ದ ಕುಟುಂಬದವರು ಕೊನೆಗೆ ಸ್ವಲ್ಪ ಹೊತ್ತು ನಿಂತು ಹುಲಿ ರಸ್ತೆ ಬಿಟ್ಟು ಕಾಡಿನೆಡೆ ತೆರಳಿದಾಗ ಕಾರು ಮುಂದೆ ಚಲಾಯಿಸಿಕೊಂಡು ತೆರಳಿದ್ದಾರೆ. ಈ ದೃಶ್ಯಗಳನ್ನು ಕಾರಿನಲ್ಲಿರುವವರು ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗಿದೆ. ಆಗಾಗ ಈ ಹುಲಿ ಪ್ರತ್ಯಕ್ಷವಾಗುತ್ತಿರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಸದ್ಯ ವಿಡಿಯೋದಲ್ಲಿರುವ ಈ ದೃಶ್ಯ ಎರಡು ವಾರದ ಹಿಂದೆ ಸೆರೆ ಹಿಡಿದಿದ್ದು ಎನ್ನಲಾಗಿದೆ.