9 ದಿನಗಳ ಕಾಲ ಚಾಮುಂಡಿ ತಾಯಿಗೆ ನವದುರ್ಗೆಯರ ಅಲಂಕಾರ ಮಾಡಿ ವಿಶೇಷ ಪೂಜೆ - latest news of dasara
🎬 Watch Now: Feature Video
ನವರಾತ್ರಿಯ 9 ದಿನ ಚಾಮುಂಡಿ ತಾಯಿಗೆ ನವದುರ್ಗೆಯರ ಅಲಂಕಾರದಲ್ಲಿ ವಿಶೇಷ ಪೂಜೆ ಸಲ್ಲಿಸುವುದು ನವರಾತ್ರಿಯ ವಿಶೇಷ. ನವರಾತ್ರಿಯ ಮೊದಲ ದಿನ ದೇವಿಗೆ ಬ್ರಾಹ್ಮಿ ಅಲಂಕಾರ, ಎರಡನೇ ದಿನ ಮಹೇಶ್ವರಿ ಅಲಂಕಾರ, ಮೂರನೇ ದಿನ ಕೌಮಾರಿ ಅಲಂಕಾರ, ನಾಲ್ಕನೇ ದಿನ ವೈಷ್ಣವಿ ಅಲಂಕಾರ, ಐದನೇ ದಿನ ವರಾಹಿ ಅಲಂಕಾರ, ಆರನೇ ದಿನ ಇಂದ್ರಾಣಿ ಅಲಂಕಾರ, ಏಳನೇ ದಿನ ಸರಸ್ವತಿ ಅಲಂಕಾರ ಮಾಡಲಾಗುತ್ತೆ. ಅಂದು ಸಂಜೆ ಕಾಳರಾತ್ರಿ ಪೂಜೆ ಕೂಡಾ ನಡೆಯುತ್ತೆ. ಹಾಗೆಯೇ ಎಂಟನೇ ದಿನ ದುರ್ಗಾ ಅಲಂಕಾರ, ಒಂಭತ್ತನೇ ದಿನ ಗಜಲಕ್ಷ್ಮೀ ಅಲಂಕಾರ ಹಾಗೂ ಕೊನೆಯ ದಿನ ಆಶ್ವರೋಹಿಣಿ ಅಲಂಕಾರ ಮಾಡಲಾಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಶಿಧರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಪ್ರತಿದಿನ ಬೆಳಗಿನ ಜಾವ 4:30ರಿಂದ 5:30ರವರೆಗೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ದರ್ಬಾರ್ ಮಂಟಪದಲ್ಲಿ ದರ್ಬಾರ್ ನಡೆಸಲಾಗುತ್ತದೆ ಎಂದರು.