ಘಟಸರ್ಪ ಕಂಗಾಲಾದೀತಲೇ ಪರಾಕ್... ಏನಿದರ ಅರ್ಥ... ಗೊರವಪ್ಪ ನುಡಿದ ಆ ಭವಿಷ್ಯವೇನು?
🎬 Watch Now: Feature Video
ಸೋಮವಾರದಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆಯಿತು. 15 ಅಡಿ ಬಿಲ್ಲು ಏರಿದ ಗೊರವಪ್ಪ ಪ್ರಸ್ತುತ ವರ್ಷದ ಕಾರ್ಣಿಕ ನುಡಿದು ಧುಮುಕಿದ್ದು ವಿಶೇಷವಾಗಿತ್ತು. ಘಟಸರ್ಪ ಕಂಗಾಲಾದೀತಲೇ ಪರಾಕ್ ಎನ್ನುತ್ತಿದ್ದಂತೆ ಭಕ್ತ ಗಣ ಜೈಕಾರ ಹಾಕಿತು. ಈ ಕಾರ್ಣಿಕ ನುಡಿ ಕೇಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ತಮಗೆ ತಕ್ಕಂತೆ ಕಾರ್ಣಿಕ ವಿಶ್ಲೇಷಣೆ ಮಾಡುತ್ತಿದ್ದ ದೃಶ್ಯಗಳು ದೇವರಗುಡ್ಡದಲ್ಲಿ ಕಂಡುಬಂದವು.