ಹುಳಿಯಾರು ಪಟ್ಟಣದ ಶ್ರೀ ಆಂಜನೇಯ ಸ್ವಾಮಿಗೆ 101 ಎಡೆ ಸೇವೆ - ತುಮಕೂರು
🎬 Watch Now: Feature Video
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ಕೊನೆ ಶನಿವಾರದಂದು ವಿಶಿಷ್ಟ ಪೂಜಾ ಕಾರ್ಯಕ್ರಮ ನೆರವೇರಿತು. 101 ಎಡೆ ಸೇವೆಯನ್ನು ಶ್ರೀ ಆಂಜನೇಯ ಸ್ವಾಮಿಗೆ ಸಲ್ಲಿಸಲಾಯಿತು. ಮೂರು ದಾಸಪ್ಪ ಮನೆತನದವರು ಸಂಪ್ರದಾಯದಂತೆ ಸ್ವಾಮಿ ಎದುರು ಇರಿಸಲಾಗಿದ್ದ ಎಡೆಯ ಸುತ್ತಲೂ ಮೂರು ಸುತ್ತು ಹಾಕಿದರು. ನಂತರ ಪ್ರತ್ಯೇಕವಾಗಿ ಇರಿಸಲಾಗಿದ್ದ ಮೂರು ಎಡೆಯನ್ನು ಸಮೀಪ ತಲೆ ಬಗ್ಗಿಸಿ ಬಾಯಲ್ಲಿಯೇ ಸ್ವೀಕರಿಸಿದ್ದು ಗಮನಾರ್ಹವಾಗಿತ್ತು. ಬಳಿಕ ದೇವರೆದುರು ಇರಿಸಲಾಗಿದ್ದ 101 ಎಡೆಯನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಯಿತು.