ಜಪ್ತಿ ಮಾಡಿದ ಬೈಕ್ನೊಂದಿಗೆ ಪರಾರಿ ಆಗಲು ಯತ್ನಿಸಿದ ಸವಾರ.. ಪೊಲೀಸರು ಮಾಡಿದ್ದೇನು ನೋಡಿ - ಬೈಕ್ ಸೀಜ್ ಮಾಡಿದ ಪೊಲೀಸರು
🎬 Watch Now: Feature Video
ಚಾಮರಾಜನಗರ : ಜಪ್ತಿ ಮಾಡಿದ್ದ ಬೈಕ್ ಅನ್ನು ಪೊಲೀಸರ ಕಣ್ತಪ್ಪಿಸಿ ತೆಗೆದುಕೊಂಡು ಹೋಗಲು ಯತ್ನಿಸಿದ ಸವಾರನನ್ನು ಚೇಸ್ ಮಾಡಿ ಮತ್ತೆ ಬೈಕ್ ವಶಪಡಿಸಿಕೊಳ್ಳಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಅನ್ನು ಪೊಲೀಸರು ಸೀಜ್ ಮಾಡಿ ರಸ್ತೆ ಬದಿ ನಿಲ್ಲಿಸಿದ್ದರು. ಈ ವೇಳೆ ಚಾಲಾಕಿ ಸವಾರ ಪೊಲೀಸರ ಕಣ್ತಪ್ಪಿಸಿ ತನ್ನ ಬೈಕ್ ಜೊತೆ ಎಸ್ಕೇಪ್ ಆಗಲು ನೋಡಿದ್ದಾನೆ. ಆಗ ಓಡಿ ಹೋಗಿ ಆತನನ್ನು ಹಿಡಿದ ಪೊಲೀಸ್ ಸಿಬ್ಬಂದಿ ಬೈಕ್ ಜೊತೆ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.