ಹರಿಹರದ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ... - ಹರಿಹರ ಗಣರಾಜ್ಯೋತ್ಸವ ಲೆಟೆಸ್ಟ್ ನ್ಯೂಸ್
🎬 Watch Now: Feature Video
ದಾವಣಗೆರೆ ಜಿಲ್ಲೆ ಹರಿಹರದ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ 71ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್. ರಾಮಪ್ಪ, ವಿಶ್ವ ನಾಯಕ ಬಿ.ಆರ್ ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನ ಹೊಂದಿರುವ ನಮ್ಮ ಭಾರತ ದೇಶವು ಇಂದು ವಿಶ್ವಮಾನ್ಯತೆ ಪಡೆದಿದೆಯೆಂದರು. 1950ರ ಜನವರಿ 26 ರಂದು ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರತಿಯನ್ನು ಸರ್ಕಾರಕ್ಕೆ ಅರ್ಪಿಸಲಾಯಿತು ಮತ್ತು ದೇಶದಲ್ಲಿ ವಿಭಜನೆಗೊಂಡ ಪ್ರಾಂತ್ಯಗಳನ್ನು ರಾಜ್ಯಗಳನ್ನಾಗಿ ವಿಂಗಡಿಸಿ ಗಣರಾಜ್ಯವನ್ನಾಗಿ ಸ್ಥಾಪಿಸಲಾಯಿತು ಎಂದು ಹೇಳಿದರು. ತಹಸೀಲ್ದಾರ್ ಕೆ.ಬಿ ರಾಮಚಂದ್ರಪ್ಪನವರು ಧ್ವಜಾರೋಹಣ ನೆರವೇರಿಸಿ ಸಂವಿಧಾನ ಜಾರಿಗೆ ಬಂದ ರೀತಿಯ ಕುರಿತು ಮಾತನಾಡಿದರು.