ತನ್ನದಲ್ಲದ ಮಕ್ಕಳಿಗೆ ನಿತ್ಯ ಹಾಲುಣಿಸುವ ತಾಯಿ.. ಮಾತೃವಾತ್ಸಲ್ಯಕ್ಕೆ ವರಾಹ ಮಾದರಿ!! - ಮುದ್ದೇಬಿಹಾಳ ಸುದ್ದಿ
🎬 Watch Now: Feature Video
ಮಾತೃವಾತ್ಸಲ್ಯಕ್ಕೆ ಮಿಗಿಲಾದುದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ತಾಯಿ ಪ್ರೇಮವೇ ಅಂತಹುದು, ಅದರಲ್ಲಿ ಮನುಷ್ಯ-ಪ್ರಾಣಿ ಎಂಬ ಬೇಧವಿಲ್ಲ. ಮುದ್ದೇಬಿಹಾಳ ಪಟ್ಟಣದ ರಾಂಪೂರ ಕಾಂಪ್ಲೆಕ್ಸ್ ಬಳಿ ಹಂದಿಯೊಂದು ಆರು ನಾಯಿಮರಿಗಳಿಗೆ ಹಾಲುಣಿಸುವ ಮೂಲಕ ಮಾತೃಪ್ರೇಮಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಈ ಹಂದಿ ನಿತ್ಯ ನಾಯಿಮರಿಗಳಿಗೆ ಹಾಲುಣಿಸಿ, ತನ್ನದೇ ಮರಿಗಳೆಂಬಂತೆ ಸಲಹುತ್ತಿದೆ. ಈ ಘಟನೆ ತಮ್ಮ ಮಕ್ಕಳಲ್ಲಿಯೇ ಮೇಲು-ಕೀಳೆಂದು ಬೇಧ ಕಾಣುವ ಮನುಷ್ಯ ಜಾತಿಗೆ ಒಂದು ಪಾಠವಾಗಿರುವ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.