ಸ್ಯಾನಿಟೈಸರ್ ಬಾಟಲ್ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಚಿತ್ರ - A picture of BJP candidate Munirat on a sanitizer bottle In Bangalore
🎬 Watch Now: Feature Video

ಮತಗಟ್ಟೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಕ್ಕೆ ಇಟ್ಟಿರುವ ಸ್ಯಾನಿಟೈಸರ್ ಬಾಟಲ್ ಮೇಲೆ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾವಚಿತ್ರವನ್ನ ಅಂಟಿಸಲಾಗಿದೆ. ಆರ್ ಆರ್ ನಗರದ ಲಗ್ಗೆರೆ ವಾರ್ಡ್ ನ ಲಕ್ಷ್ಮೀದೇವಿ ನಗರದಲ್ಲಿ, ಜೆಡಿಎಸ್ ಪಕ್ಷದ ಬೂತ್ ನಲ್ಲಿ ಈ ಘಟನೆ ನಡೆದಿದ್ದು, ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿದೆ. ಪೊಲೀಸರು, ಚುನಾವಣಾ ಆಯೋಗ ನೀತಿ ಸಂಹಿತೆ ಇದ್ದರೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗ್ತಿದೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಅಭ್ಯರ್ಥಿ ಪ್ರಚಾರವನ್ನು ಮತದಾನದ ಹಿಂದಿನ ದಿನವೇ ನಿಲ್ಲಿಸಬೇಕಾಗತ್ತೆ, ಜೊತೆಗೆ ಯಾವುದೇ ರೀತಿ ಪ್ರಚಾರ ಮಾಡುವಂತಿಲ್ಲ.