ಮೋಟುದ್ದ ಅಲ್ಲ, ಗಿಡದಷ್ಟು ಎತ್ತರಕ್ಕೆ ಬೆಳೆದ ಅಣಬೆ.. ಇದರ ತೂಕ ಕೇಳಿದ್ರೆ ಅಚ್ಚರಿಪಡ್ತೀರ: ವಿಡಿಯೋ - A large mushroom
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5030553-thumbnail-3x2-mushrum.jpg)
ಧಾರವಾಡ: ಸಾಮಾನ್ಯವಾಗಿ ಅಣಬೆ ಬೆಳೆಯುವುದು ಗೇಣುದ್ದ ಮಾತ್ರ. ಆದರೆ, ಧಾರವಾಡದ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಎರಡು ಅಡಿ ಎತ್ತರದ 15ಕೆಜಿ ತೂಕದ ಬೃಹತ್ ಅಣಬೆಯೊಂದರ ಗುಚ್ಛ ಕಂಡು ಜನ ಶಾಕ್ ಆಗಿದ್ದಾರೆ. ಸೆಲ್ಪಿಗಾಗಿ ತಾ ಮುಂದು, ನಾ ಮುಂದು ಎನ್ನುತ್ತಿದ್ದಾರೆ. ಅಣಬೆ ಒಂದರ ಪಕ್ಕ ಒಂದು ಬೆಳೆಯುವುದು ಸಾಮಾನ್ಯ. ಆದರಿಲ್ಲಿ ಒಂದೇ ಕಾಂಡದಲ್ಲಿ ಐದಾರು ಅಣಬೆಗಳನ್ನು ಅಂಟಿಸದಂತೆ ಗುಚ್ಛವಾಗಿ ಬೆಳೆದಿದೆ. ಇಷ್ಟು ದೊಡ್ಡ ಗಾತ್ರದ ಅಣಬೆ ನೋಡಿರುವ ಜನ ಯಾರೂ ಮನೆಗೆ ಒಯ್ಯಲು ಮುಂದಾಗುತ್ತಿಲ್ಲ. ಮಾತ್ರ ತಂಡೋಪ ತಂಡವಾಗಿ ಬಂದು ಈ ಅಣಬೆ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.