ತಲಕಾವೇರಿಯಲ್ಲಿ ಸ್ವರ್ಗವೇ ಧರೆಗಿಳಿದು ಬಂದ ಸಂಭ್ರಮ! - kodagu minister district incharge v somanna
🎬 Watch Now: Feature Video
ಕರುನಾಡ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಹಬ್ಬದ ವಾತಾವರಣ. ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡೋ ಕಾವೇರಿಯನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯ ಭಕ್ತರ ದಂಡು ನೆರೆದಿತ್ತು. ಪುರೋಹಿತರ ಮಂತ್ರ ಪಠಣ, ಭಕ್ತರ ಭಾವೋದ್ವೇಗದ ನಡುವೆ ಬ್ರಹ್ಮ ಕುಂಡಿಕೆಯಿಂದ ಗಂಗೆಯೊಂದಿಗೆ ಉಕ್ಕಿಬಂದ ಕಾವೇರಿ ಮಾತೆಯ ದರ್ಶನ ಪಡೆದ ಭಕ್ತರು ಧನ್ಯರಾದರು.