ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ.. ಖದೀಮರ ಚಲನವಲನ ಸಿಸಿಟಿವಿಯಲ್ಲಿ ಸೆರೆ - ಗದಗ್ ಎಸ್ಬಿಐ ಬ್ಯಾಂಕ್ ಬಳಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ
🎬 Watch Now: Feature Video
ಗದಗ : ಎಟಿಎಂ ಕೊರೆದು ದರೋಡೆಗೆ ಯತ್ನಿಸಿದ ಘಟನೆ ನಗರದ ಹಾತಲಗೇರಿ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ ಬಳಿ ನಡೆದಿದೆ. ಎಟಿಎಂ ಒಳಗೆ ನುಗ್ಗಿದ ಇಬ್ಬರು, ಸಿಸಿಟಿವಿಗೆ ಕೆಂಪು ಪಟ್ಟಿ ಅಂಟಿಸಿ ಗ್ಯಾಸ್ ಪೈಪ್ ಕಟರ್ನಿಂದ ಮಷಿನ್ ಕತ್ತರಿಸಲು ಮುಂದಾಗಿದ್ದರು. ಆದರೆ ಅವರ ಪ್ರಯತ್ನ ವಿಫಲವಾಗಿದ್ದು, ಬರಿಗೈಲಿ ಹಿಂದಿರುಗಿದ್ದಾರೆ. ಖದೀಮರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೆಟಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.